ಲಕ್ನೋ: ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi Birthday) ಅವರ 56ನೇ ಜನ್ಮದಿನವನ್ನು ಉತ್ತರ ಪ್ರದೇಶದ(Uttara Pradesh) ವಾರಾಣಸಿಯಲ್ಲಿ(Varanasi) ಯುವ ಕಾಂಗ್ರೆಸ್ ಕಾರ್ಯಕರ್ತರು ವಿಶೇಷವಾಗಿ ಆಚರಿಸಿದರು. ಗಂಗಾ ನದಿಯ ದಡದಲ್ಲಿ ರಾಹುಲ್ ಗಾಂಧಿ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಶುಭ ಹಾರೈಸಿದರು.
ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಹುಟ್ಟಹಬ್ಬದ ಹಿನ್ನಲೆ ಕಾಂಗ್ರೆಸ್ ಕಾರ್ಯಕರ್ತರು ಅನೇಕ ಕಡೆ ವಿಭಿನ್ನವಾಗಿ ಹುಟ್ಟುಹಬ್ಬವನ್ನ ಆಚರಿಸಿದ್ದು, ಇದರ ನಡುವೆ ವಾರಣಾಸಿಯ ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ವಿಕಾಶ್ ಸಿಂಗ್ ಗಂಗಾ ನದಿ ದಡದಲ್ಲಿ ರಾಹುಲ್ ಗಾಂಧಿ ಹುಟ್ಟುಹಬ್ಬವನ್ನ ಆಚರಿಸಿದ್ದಾರೆ. ಪರಶುರಾಮನ ಅವತಾರದ ಮಾದರಿಯಲ್ಲಿ ಚಿತ್ರಿಸಿರುವ ರಾಹುಲ್ ಗಾಂಧಿ ಅವರ ವಿಶೇಷ ಕಟೌಟ್ಗೆ ಹಾಲು ಮತ್ತು ಗಂಗಾಜಲವನ್ನ ಅರ್ಪಿಸಿ ಪೂಜೆ ಸಲ್ಲಿಸಿದ್ದಾರೆ.
ಪೋಸ್ಟರ್ನಲ್ಲಿ ಒಂದು ಕೈಯಲ್ಲಿ ಪರಶು (ಕೊಡಲಿ) ಹಾಗೂ ಮತ್ತೊಂದು ಕೈಯಲ್ಲಿ ಭಾರತದ ಸಂವಿಧಾನ ಹಿಡಿದಿರುವ ರೀತಿಯಲ್ಲಿ ಅವರ ಚಿತ್ರಣ ಮಾಡಲಾಗಿತ್ತು. ಸ್ಥಳೀಯ ಪುರೋಹಿತರು ವೇದ ಮಂತ್ರಗಳನ್ನು ಪಠಿಸಿ ಆಶೀರ್ವಾದ ನೀಡಿದರು
ಇನ್ನು ಈ ಕುರಿತು ವಿಕಾಶ್ ಸಿಂಗ್ ಮಾತನಾಡಿ, ನಮ್ಮ ಗೌರವಾನ್ವಿತ ನಾಯಕ ರಾಹುಲ್ ಗಾಂಧಿ ಅವರ ಜನ್ಮದಿನವನ್ನು ಯುವ ಕಾಂಗ್ರೆಸ್ ವತಿಯಿಂದ ಆಚರಿಸಿದ್ದೇವೆ. ಬ್ರಾಹ್ಮಣ ಸಮುದಾಯದವರು ವೇದ ಮಂತ್ರಗಳ ಮೂಲಕ ಅವರಿಗೆ ಆಶೀರ್ವಾದ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ದೇಶದ ಪ್ರಧಾನಿಯಾಗಲಿ ಎಂಬುದು ನಮ್ಮ ಆಶಯ ಎಂದು ಹೇಳಿದರು. ಈ ವಿಶಿಷ್ಟ ಆಚರಣೆಯ ವಿಡಿಯೋಗಳು ಮತ್ತು ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ರಾಹುಲ್ ಗಾಂಧಿ ಅವರ ಜನ್ಮದಿನದ ಈ ಆಚರಣೆ ರಾಜಕೀಯ ವಲಯದಲ್ಲೂ ಸಾಕಷ್ಟು ಗಮನ ಸೆಳೆದಿದೆ.