Search


ರಾಮಲಿಂಗ ರೆಡ್ಡಿ ರಾಜೀನಾಮೆ ಬೆನ್ನಲ್ಲೇ ರಾಜ್ಯಕ್ಕೆ ರಾಹುಲ್‌ ಗಾಂಧಿ ಆಗಮನ...!

ಬೆಂಗಳೂರು : ಸಚಿವ ಸ್ಥಾನಕ್ಕೆ ಕಾಂಗ್ರೆಸ್‌ ಹಿರಿಯ ನಾಯಕ ರಾಮಲಿಂಗ ರೆಡ್ಡಿ ರಾಜೀನಾಮೆ ನೀಡಿದ್ದು, ಕಾಂಗ್ರೆಸ್‌ನಲ್ಲಿ ಈ ಬೆಳವಣಿಗೆ ಬಿರುಗಾಳಿ ಏಳಿಸಿದೆ, ಇದರ ಬೆನ್ನಲ್ಲೇ ಇಂದು ಮಧ್ಯಾಹ್ನ ಕಾಂಗ್ರೆಸ್‌ ಅಧಿನಾಯಕ ರಾಹುಲ್‌ ಗಾಂಧಿ ಬೆಂಗಳೂರಿಗೆ ಭೇಟಿ ನೀಡುತ್ತಿದ್ದು, ರಾಮಲಿಂಗ ರೆಡ್ಡಿಯವರನ್ನ ಭೇಟಿಯಾಗಿ ಮನವೊಲಿಸುವ ಕೆಲಸ ಮಾಡ್ತಾರಾ ಎಂಬುದನ್ನ ನೋಡಬೇಕಿದೆ.

ಎರಡು ದಿನಗಳ ಹಿಂದಷ್ಟೇ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ರಾಮಲಿಂಗ ರೆಡ್ಡಿಯವರು ಸಚಿವ ಸ್ಥಾನಕ್ಕೆ ದಿಢೀರ್‌ ರಾಜೀನಾಮೆ ನೀಡಿದ್ದಾರೆ. ಬೆಂಗಳೂರು ಅಭಿವೃದ್ದಿ ಖಾತೆಗೆ ರಾಮಲಿಂಗ ರೆಡ್ಡಿಯವರು ಬೇಡಿಕೆ ಇಟ್ಟಿದ್ದರು, ಆದರೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರ ಬೇಡಿಕೆಯನ್ನ ನಿರಾಕರಿಸಿ, ಜಲ ಸಂಪನ್ಮೂಲ ಇಲಾಖೆ ನೀಡಿರುವುಕ್ಕೆ ಬೇಸರಗೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ರಾಜ್ಯಕ್ಕೆ ಖರ್ಗೆ, ರಾಹುಲ್‌ ಭೇಟಿ..!

ಇಂದು ಮಧ್ಯಹ್ನ 1 ಗಂಟೆಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ, ಮಲ್ಲಿಕಾರ್ಜುನ್‌ ಖರ್ಗೆ ಅವರು ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಹಿನ್ನಲೆ ಹೈಕಮಾಂಡ್‌ ನಾಯಕರು ರಾಜ್ಯಕ್ಕೆ ಆಗಮಿಸುತ್ತಿದ್ದು, ಈ ವೇಳೆ ರಾಹುಲ್‌ ಗಾಂಧಿ ರಾಮಲಿಂಗ ರೆಡ್ಡಿಯವರನ್ನ ಭೇಟಿಯಾಗಿ ಮಾತನಾಡುತ್ತಾರಾ ಎಂಬುದನ್ನ ಕಾದು ನೋಡಬೇಕಿದೆ. ಈಗಾಗಲೇ ಎಐಸಿಸಿ ಕಾರ್ಯದರ್ಶಿ ಅಭಿಷೇಕ್‌ ದತ್ತ ಕೋರಮಂಗಲದಲ್ಲಿರುವ ರಾಮಲಿಂಗ ರೆಡ್ಡಿಯವರ ಕಚೇರಿಗೆ ಆಗಮಿಸಿದ್ದು , ಸಚಿವರ ಮನವೊಲಿಕೆ ಯತ್ನಿಸಿದ್ದಾರೆ ಎಂಬುದು ತಿಳಿದು ಬಂದಿದೆ. 

By Ravikumar - 05-06-2026


Ads in Post