Search


ನಾನೊಬ್ಬನೆ ಡಿಸಿಎಂ ಆಗಲು ಸಿದ್ದರಾಮಯ್ಯ ಕಾರಣ; ಡಿಸಿಎಂ ಪರಮೇಶ್ವರ್‌

ಬೆಂಗಳೂರು: ಪರಮೇಶ್ವರ್‌ ಒಬ್ಬರನ್ನೇ ಉಪಮುಖ್ಯಮಂತ್ರಿ ಮಾಡಲು ನಾನೇ ಹೇಳಿದ್ದು ಎಂದ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಕೊಟ್ಟಿದ್ದು, ಈ ಹೇಳಿಕೆಗೆ ಪ್ರತಿಕ್ರಿಯೆ ಕೊಟ್ಟ ಡಿಸಿಎಂ ಪರಮೇಶ್ವರ್‌ ʻಸಿದ್ದರಾಮಯ್ಯ ನನ್ನ ಹೆಸರನ್ನು ಮುಖ್ಯಮಂತ್ರಿ ಹುದ್ದೆಗೆ ಶಿಫಾರಸು ಮಾಡಿದ್ದರು, ಆದರೆ ಹೈಕಮಾಂಡ್ ಸ್ಕೀಮ್ ಬೇರೆಯೇ ಇತ್ತು ಎಂದು ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಪರಮೇಶ್ವರ್‌ ʻನಾನು ಮತ್ತು ಸಿದ್ದರಾಮಯ್ಯ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ, ನಾನು 8 ವರ್ಷಗಳ ಕಾಲ ಪಿಸಿಸಿ ಅಧ್ಯಕ್ಷನಾಗಿದ್ದೆ. ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ. ನಂತರ ನಾನು 2015 ರಲ್ಲಿ ಗೃಹ ಸಚಿವರಾಗಿ ಅವರ ಸಂಪುಟಕ್ಕೆ ಸೇರಿದೆ. 2023 ರಲ್ಲಿ ನಾನು ಅವರ ಮಂತ್ರಿ ಮಂಡಲ ಸೇರಿದೆ. ನಾವು ಒಟ್ಟಿಗೆ ಕೆಲಸ ಮಾಡಿದ್ದೇವೆ, ಅವರಿಗೆ ನನ್ನ ಬಗ್ಗೆ ಚೆನ್ನಾಗಿ ತಿಳಿದಿದೆ ಎಂದಿದ್ದಾರೆ.

ನಾಲ್ಕೈದು ಡಿಸಿಎಂ ಸ್ಥಾನಕ್ಕೆ ಪ್ಲಾನ್‌..!

ಇನ್ನು ಡಿಕೆ ಶಿವಕುಮಾರ್‌ ಅವರನ್ನ ನೂತನ ಸಿಎಂ ಆಗಿ ಘೋಷಿಸಿದ ನಂತರ, ಹೈಕಮಾಂಡ್‌ ಹೆಚ್ಚುವರಿಯಾಗಿ ನಾಲ್ಕೈದು ಉಪ ಮುಖ್ಯಮಂತ್ರಿ ಸ್ಥಾನಗಳನ್ನ ಸೃಜಿಸುವ ಯೋಜನೆಯಲ್ಲಿತ್ತು ಎಂದು ಪರಮೇಶ್ವರ್‌ ಹೇಳಿದ್ದು. ಸಿದ್ದರಾಮಯ್ಯನವರು ಹಠ ಹಿಡಿದು ಒಬ್ಬರಿಗೆ ಮಾತ್ರ ಡಿಸಿಎಂ ಹುದ್ದೆ ಕೊಡುವಂತೆ ಹೈಕಮಾಂಡ್‌ ಮುಂದೆ ನನ್ನ ಹೆಸರನ್ನ ಶಿಫಾರಸ್ಸು ಮಾಡಿದ್ದರು ಎಂದು ತಿಳಿಸಿದ್ದಾರೆ.

By Ravikumar - 26-08-2026


Ads in Post