ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವಕನಿಗೆ ಎದುರು ಸೀಟಿನಲ್ಲಿದ್ದ ಮಹಿಳೆಯೊಬ್ಬರು ತನ್ನ ಕಾಲುಗಳನ್ನು ಆತನ ತೊಡೆಗಳ ಮಧ್ಯೆ ಇರಿಸಿದ್ದರಿಂದ ಮುಜುಗರದ ಅನುಭವವಾಗಿದೆ. ಈ ಘಟನೆಯನ್ನು ಯುವಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಪೋಸ್ಟ್ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿದೆ.
ಮಹಿಳೆಯಿಂದ ಅಸಭ್ಯವಾದ ವರ್ತನೆ
ಆರಾಮದಾಯಕ ಮತ್ತು ಕಡಿಮೆ ಬೆಲೆಯ ಪ್ರಯಾಣಕ್ಕಾಗಿ ಜನರು ರೈಲು ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಪ್ಯಾಸೆಂಜರ್ ಬೋಗಿಯಲ್ಲಿ ಜನಸಂದಣಿ ಹೆಚ್ಚಾಗಿರುತ್ತದೆ. ಈ ಸಮಯದಲ್ಲಿ ಒಬ್ಬರಿಗೆ ಮತ್ತೊಬ್ಬರಿಗೆ ಕಾಲುಗಳು ತಗಲುತ್ತವೆ. ಜನಸಂದಣಿ ಕಡಿಮೆಯಾದ್ರೆ ಜನರು ಸ್ವಲ್ಪ ಆರಾಮದಾಯಕವಾಗಿ ಕುಳಿತುಕೊಳ್ಳಲು ಪ್ರಯತ್ನಿಸುತ್ತಾರೆ. ಸಾಮಾನ್ಯವಾಗಿ ರೈಲಿನಲ್ಲಿ ಪ್ರಯಾಣಿಕರು ಕಾಲುಗಳನ್ನು ತಮ್ಮ ಮುಂದಿನ ಆಸನಕ್ಕೆ ತಾಗಿಸಿ ಕುಳಿತುಕೊಳ್ಳುತ್ತಾರೆ.
ಯುವಕನ ಪ್ರಶ್ನೆ ಏನು?
ನಾನು 28 ವಯಸ್ಸಿನ ಯುವಕ. ರೈಲಿನ ಮೂಲಕ ಮನೆಗೆ ತೆರಳುತ್ತಿದ್ದಾಗ ಸುಮಾರು 26 ರಿಂದ 30 ವಯಸ್ಸಿನ ಮಹಿಳೆಯೊಬ್ಬರು ನನ್ನ ತೊಡೆಗಳ ಮಧ್ಯೆಯೇ ಕಾಲಿರಿಸಿದರು. ಇಷ್ಟು ಮಾತ್ರ ಮಹಿಳೆ ತಮ್ಮ ಕಾಲುಗಳನ್ನು ಶೇಕ್ ಮಾಡುತ್ತಿದ್ದರು. ಇದರಿಂದ ಮಹಿಳೆ ಕಾಲುಗಳು ನನ್ನ ತೊಡೆ ಮತ್ತು ಖಾಸಗಿ ಭಾಗಕ್ಕೆ ಟಚ್ ಆಗುತ್ತಿತ್ತು. ಇದರಿಂದ ಆಘಾತಕ್ಕೊಳಗಾಗಿ ಮೂರ್ನಾಲ್ಕು ನಿಮಿಷ ತಟಸ್ಥನಾಗಿ ಕುಳಿತಿದ್ದೆ.
ಹೃದಯ ಬಡಿತ ಹೆಚ್ಚಾಗಿತ್ತು
ಈ ಸಮಯದಲ್ಲಿ ಕಾಲುಗಳನ್ನು ಆಸನದಿಂದ ಕೆಳಗಿಡಿ ಎಂದು ಧೈರ್ಯವಾಗಿ ಹೇಳಲು ನನ್ನಿಂದ ಸಾಧ್ಯವಾಗಲಿಲ್ಲ. ಈ ರೀತಿ ಕಾಲಿಟ್ಟು ಮತ್ತೊಬ್ಬರಿಗೆ ತೊಂದರೆ ಮಾಡೋದು ಎಷ್ಟು ಸರಿ ಎಂದು ನನಗೆ ಗೊತ್ತಾಗುತ್ತಿಲ್ಲ. ಆದ್ರೆ ಈ ಸಂದರ್ಭದಲ್ಲಿ ನಾನು ತುಂಬಾ ಮುಜುಗರಕ್ಕೊಳಗಾದೆ. ಆಕೆಯ ಕಾಲುಗಳು ನನ್ನ ಮರ್ಮಾಂಗಕ್ಕೆ ಟಚ್ ಆದಾಗ ಭಯದಿಂದ ನನ್ನ ಹೃದಯ ಬಡಿತ ಹೆಚ್ಚಾಗಿತ್ತು ಎಂದು ಯುವಕ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.
ವೈರಲ್ ಆಯ್ತು ಪೋಸ್ಟ್
ಈ ವೈರಲ್ ಪೋಸ್ಟ್ನ್ನು AbhishekkkK (@Abhishekkkk10) ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಈ ರೀತಿ ಮುಜುಗೊರಕ್ಕೊಳಗಾದ ಯುವಕ ಯಾರು? ಯಾವ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಎಂಬುದರ ಬಗ್ಗೆ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ. ಈ ಪೋಸ್ಟ್ಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಇದೇ ಕೆಲಸವನ್ನು ಹುಡುಗರು ಮಾಡಿದ್ರೆ ರಾಷ್ಟ್ರಮಟ್ಟದಲ್ಲಿ ಸುದ್ದಿ ಆಗುತ್ತಿತ್ತು. ಮಹಿಳೆಯರಂತೆ ಪುರುಷರಿಗೂ ಗೌರವ ಇರುತ್ತೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.